Suggestions for Safety in the House
ಮನೆಯಲ್ಲಿ ವಹಿಸಬೇಕಾದ ಎಚ್ಚರಿಕೆಗಳು
ಈ ಕೆಳಕಂಡ ಸಲಹೆಗಳನ್ನು ಪಾಲಿಸುವುದರಿಂದ ಮನೆಯಲ್ಲಿ ವ್ಯಕ್ತಿಯ ಸುರಕ್ಷಣೆಯನ್ನು ಹೆಚ್ಚಿಸಬಹುದು ಹಾಗು ಆತನು ಆದಷ್ಟು ಮಟ್ಟಿಗೆ ತನ್ನ ಕೆಲಸ ತಾನೇ ಮಾಡಿಕೊಳ್ಳಲು ಸಹಾಯ ಮಾಡಬಹುದು.
Patient’s welfare
ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುವುದು :
೧) ವ್ಯಕ್ತಿಯ ಬಳಿ ಒಂದು ಘಂಟೆ ಇರಿಸಿ. ಅಗತ್ಯ ಬಿದ್ದಾಗ ಸಹಾಯ ಕೇಳಲು ಅದನ್ನು ಉಪಯೋಗಿಸಬಹುದು.
೨) ಮುಖ್ಯವಾದ ಫೋ ನ್ ನಂಬರುಗಳನ್ನು ಫೋನ್ ನಲ್ಲಿ ನಮೂದಿಸಿ. ಅಗತ್ಯವಾದ ನಂಬರುಗಳನ್ನು ಸ್ಪೀಡ್ ಡಯಲ್ ನಲ್ಲಿ ಹಾಕಿ ಅಥವಾ ವ್ಯಕ್ತಿಗೆ ಸುಲಭವಾಗಿ ಸಿಗುವಂತೆ ದೊಡ್ಡ ಅಕ್ಷರಗಳಲ್ಲಿ ಬರೆದಿಡಿ.
೩)ವ್ಯಕ್ತಿಯು ಒಂಟಿಯಾಗಿ ವಾಸಿಸುತ್ತಿದ್ದರೆ ದಿನವೂ ಯಾರಾದರು ಅವರನ್ನು ಭೇಟಿ ಮಾಡುವಂತೆ ಅಥವ ಫ಼ೋನ್ ಮಾಡುವಂತೆ ಏರ್ಪಾಡು ಮಾಡಿ.
Home environment
ಮನೆಯ ಪರಿಸರ:
೧)ವ್ಯಕ್ತಿಯು ನಡೆದಾಡುವ ಜಾಗದಲ್ಲಿ ಹಿಡಿದುಕೊಳ್ಳಲು ಆಗುವಂತೆ ಗೋಡೆಗೆ ಸರಳು ಹಾಕಿಸಿ ಅಥವಾ ಬೇರೇನಾದರೂ ವ್ಯವಸ್ಥೆ ಮಾಡಿ.
೨)ಮನೆಯಲ್ಲಿರುವ ಹೊಸಿಲು ತೆಗೆಸಿ , ನೆಲಹಾಸು ಹಾಗು ಇತರ ಪೀಠೋಪಕರಣಗಳನ್ನು ಎತ್ತಿಡಿ. ಇದರಿಂದ ವ್ಯಕ್ತಿಯು ಮನೆಯಲ್ಲಿ ಸುಲಭವಾಗಿ ಚಲಿಸಬಹುದು.
೩)ಚಪ್ಪಲಿ ಹಾಗೂ ಶೂ ಗೆ ರಬ್ಬರ್ ಬುಡ ಇರಲಿ. ಇದರಿಂದ ವ್ಯಕ್ತಿಯು ಆಕಸ್ಮಿಕವಾಗಿ ಜಾರುವುದು ತಪ್ಪಿಸಬಹುದು.
Kitchen environment
ಅಡುಗೆ ಕೋಣೆಯ ಪರಿಸರ:
೧) ಅಡುಗೆ ಕಟ್ಟೆಯ ವ್ಯಕ್ತಿಗೆ ಸುಲಭವಾಗಿ ಎಟಕಿಸುವಂತೆ ಅದರ ಎತ್ತರವನ್ನು ಸರಿಹೊಂದಿಸಿ..
೨) ಅಗಲವಾದ ಮತ್ತು ಉದ್ದವಾದ ಹಿಡಿಗಳಿರುವ ಪಾತ್ರೆಗಳನ್ನು ಬಳಸಿ. ಊಟಕ್ಕೆ ಅಂಚಿರುವ ತಟ್ಟೆಯನ್ನು ಬಳಸುವುದರಿಂದ ಚೆಲ್ಲುವುದನ್ನು ತಪ್ಪಿಸಬಹುದು.
೩ )ವ್ಯಕ್ತಿಯು ಪಾಲಿಯೆಸ್ಟರ್/ ನೈಲಾನ್ ಬಟ್ಟೆ ಅಥವ ಉದ್ದ ತೋಳಿರುವ ಬಟ್ಟೆ ಧರಿಸಿ ಅಡುಗೆ ಮಾಡಲು ಬಿಡಬೇಡಿ. ಇದರಿಂದ ಬೆಂಕಿ ಅಪಘಾತಗಳು ಸಂಭವಿಸಬಹುದು.
೪)ಈಗ ಮಾರುಕಟ್ಟೆಯಲ್ಲಿ ಮಣಿಕಟ್ಟಿನಿಂದ ಚಲಾಯಿಸಲು ಸಾದ್ಯವಾಗುವ ನಲ್ಲಿಗಳು ದೊರಕುತ್ತವೆ. ಅಡುಗೆಮನೆಯಲ್ಲಿ ಈ ರೀತಿಯ ಕೊಳಾಯಿಗಳನ್ನು ಹಾಕಿಸಿ.
Bathroom environment
ಸ್ನಾನದ ಮನೆಯ ಪರಿಸರ:
೧) ವ್ಯಕ್ತಿಯು ಒ ಳಗಿನಿಂದ ಚಿಲಕ ಹಾಕಿಕೊಳ್ಳದಂತೆ ಎಚ್ಚರಿಕೆ ವಹಿಸಿ.
೨) ಬಚ್ಚಲ ಮನೆಯನ್ನು ಆದಷ್ಟೂ ನೆಲ ಒದ್ದೆ ಇರದಂತೆ ನೋಡಿಕೊಳ್ಳಿ. ರಬ್ಬರ್ ಮ್ಯಾಟ್ ಹಾಕಿ.
೩) ಸ್ನಾನದ ಸೋಪನ್ನು ನಲ್ಲಿಗೆ ನೇತು ಹಾಕಿ. ಇದರಿಂದ ಸ್ನಾನ ಮಾಡುತ್ತಿರುವಾಗ ಸೋಪು ಬೀಳದಂತೆ ತಡೆಯಬಹುದು.
೪)ಬಚ್ಚಲ ಮನೆಯಲ್ಲಿ ಕುಳಿತುಕೊಳ್ಳಲು ಭದ್ರವಾದ ಸ್ಟೂಲ್ ಒಂದನ್ನು ಇರಿಸಿ.
೫) ಸಾಧ್ಯವಿದ್ದಲ್ಲಿ ಶವರ್ ಅಳವಡಿಸಿ. ಇದರಿಂದ ವ್ಯಕ್ತಿಗೆ ಸ್ನಾನ ಮಾಡಲು ಸುಲಭವಾಗುತ್ತದೆ.
೬ ) ಕಮೋಡ್ ಬಳಸಿ ಅಥವ ಕುರ್ಚಿಯನ್ನು ಟಾಯಿಲೆಟ್ ಬಳಕೆಗೆ ಅಳವಡಿಸಿಕೊಳ್ಳಿ.