Can a person have aphasia without having a physical impairment?
ಒಬ್ಬ ವ್ಯಕ್ತಿಯಲ್ಲಿ ದೈಹಿಕ ತೊಂದರೆ /ನ್ಯೂನತೆ ಇಲ್ಲದೆಯೂ ವಾಕ್ ಸ್ತಂಭನ ಇರಬಹುದೆ?
ಹೌದು. ಕೆಲವು ವ್ಯಕ್ತಿಗಳಲ್ಲಿ ಬರೀ ವಾಕ್ ಸ್ತಂಭನ ಮಾತ್ರ ಕಂಡುಬರಬಹುದು ಆದರೆ ಹೆಚ್ಚಿನಾಂಶ ವಾಕ್ ಸ್ತಂಭನ ಇದ್ದಲ್ಲಿ ಅದರೊಟ್ಟಿಗೆ ದೈಹಿಕ ತೊಂದರೆಗಳೂ ಇರುತ್ತವೆ . ಕೈಕಾಲುಗಳಲ್ಲಿ ನಿತ್ರಾಣ , ಅರೆನಾರಿ , ಬಲಗೈ ಮತ್ತು ಬಲಗಾಲಿನ ಚಲನೆ ಇಲ್ಲದಿರುವುದು , ಬಲಭಾಗದ ಸ್ಪರ್ಶಜ್ಞಾನ ಕಳೆದುಕೊಳ್ಳುವುದು, ದೃಷ್ಟಿ ದೋಷ ಇವೇ ಮುಂತಾದ ದೈಹಿಕ ತೊಂದರೆಗಳು ವಾಕ್ ಸ್ತಂಭನದ ಜೊತೆ ಸಾಮಾನ್ಯವಾಗಿ ಕಂಡುಬರುತ್ತವೆ.